ಈ ಗಹನವಾದ ವಾಕ್ಯ ಏನು ಹೇಳುತ್ತಿದೆ? ಮೊದಲಿಗೆ land of the ಬೇವ್ ಹೇಗೆ ಬಂತು ನೋಡೋಣ. ಇದು ತೀರ ಸುಲಭದ್ದು. ನನ್ನ ಅಭಿಪ್ರಾಯದಲ್ಲಿ ’ಲ್ಯಾಂಡ್ ಆಫ಼್ ಮಿಲ್ಕ್ ಎಂಡ್ ಹನಿ’ಯಾದಂತಹ ಅಮೇರಿಕಾದಲ್ಲಿ ಬಾಳಲು ಮುಕ್ಕಾಲು ಪಾಲು ಭಾರತೀಯರಿಗೆ ಇರಲೇಬೇಕಾದ ಒಂದು ಅರ್ಹತೆ ಎಂದರೆ ಜೀವನದಲ್ಲಿ Stressಉ. ಬೇವು ಈ ಕಹಿ ಸತ್ಯದ ಸಂಕೇತವಿರಬಹುದೆ? ಹಾಲು ಜೇನಿನ ಕಣಿಕೆಯಲ್ಲಿ ಅಡಗಿರುವುದು ಬೇವಿನ ಹೂರಣವೆ?. ಅಥವಾ ಅಮೇರಿಕಾದ ಸಂಕೇತಗಳಾದ ಕೋಕ್ ಮತ್ತು ಪೆಪ್ಸಿಯಂತೆ ಬೇವ್‌ರೇಜ್‌ನ ಸಂಕೇತವೆ? ರೋಡ್ ರೇಜಿನಂತೆ ಈ ಬೇವ್‌ರೇಜ್ ಅಮೇರಿಕ ನಮಗಿತ್ತ ಬಳುವಳಿ. ಅಮೇರಿಕದಲ್ಲಿರುವ ಕರಿಯರು ಈ stressಗೆ ಮಿಕ್ಕವರಿಗಿಂತ ಹೆಚ್ಚಾಗಿ ಬಲಿಯಾಗುತ್ತಾರೆ ಎಂಬುದು ಯಾರೊ ಸಂಶೋದಕರು ಪತ್ತೆ ಮಾಡಿರುವ ಒಂದು ಅಂಶ. ಈ ಬೇವು, Stress ಅಥವ rageಗೆ ಸಂಕೇತವಿರಬಹುದು ಎಂದೇನೊ ಹೇಳಿದೆವು. ಆದರೆ ಕರಿಯ ಜನಾಂಗದಲ್ಲಿ ಸಾಮಾನ್ಯವಾಗಿರುವ ತೊಂದರೆಗಳಿಗೆ ಅಂದರೆ ಕರಿBEVRAGEಇಗೂ ನಮ್ಮ ಕರಿಬೇವಿಗೂ ಯಾವುದೇ ಸಂಬಂಧ ಕಲ್ಪಿಸಬಾರದು ಎನ್ನುವುದನ್ನು ಇಲ್ಲಿ ಮರೆಯಬಾರದು.
ಇನ್ನು ಬೆಲ್‌ಗೆ ಬರೋಣ. ತಕ್ಷಣ ಹೊಳೆಯುವುದು Taco bell.
ಅಮೇರಿಕದಲ್ಲಿರುವ ಭಾರತೀಯರು - ಘಂಟೆಗೆ ೭ ಡಾಲರ್ ಸಂಪಾದಿಸುವ ವಿಧ್ಯಾರ್ಥಿಗಳು, ನೂರೈವತ್ತು ಕೇಳುತ್ತಿದ ಕನ್ಸಲ್ಟೆಂಟುಗಳು, ಕಾರಲ್ಲಿ vacation ಹೋಗುವ ಮಂದಿ, ಗ್ಯಾಸ್ ಸ್ಟೇಶನ್ ಪಂಜಾಬಿಗಳು, ಮೋಟೆಲ್ ಗುಜುರಾತಿಗಳು , ವೀಸ ಸಿಕ್ಕ ಭಾಗ್ಯಶಾಲಿ ರಾಜಕಾರಣಿಗಳು - ಎಲ್ಲ ಹೊಟ್ಟೆಹಸಿವಾದಾಗ ನಿರ್ಯೋಚನೆಯಿಂದ ನುಗ್ಗುವುದು TACO Bellಗೇನೆ. ತಿನ್ನುವುದು ಅದೇ Seven layered burritoವನ್ನು. ತಿನ್ನಲು ಏನೊ ಖಾರವಾಗಿ ಸಿಗುತಲ್ಲ - ಅಷ್ಟೇ ಸಾಕು. ಮೆಕ್ಸಿಕೊದ ಪದ್ದತಿಯ ಅಡುಗೆಯಾದರು - TACO BELL ಅಮೆರಿಕದ ಜೀವನದ ಒಂದು ಮುಖ್ಯ ಏಳೆ.
ನೆನಪಿಗೆ ಬರುವ ಇನ್ನೊಂದು ಬೆಲ್ ಎಂದರೆ ಫಿಲಡೆಲ್ಫಿಯಾದ ಓಡೆದ ಲಿಬರ್ಟಿ ಬೆಲ್ಲ್.1776 ಜುಲೈ
೭೦ರ ದಶಕದಲ್ಲಿ ಪ್ರಸಿದ್ದಿಯಲ್ಲಿದ ಬೆಲ್‌ಬಾಟಮ್ ಸಹ ಅಮೇರಿಕದ ಕೊಡುಗೆ. ಅಮೇರಿಕ ಎಂದ ಮೇಲೆ ಹಾಲಿವುಡ್ ಮರೆಯಲಾಗುವುದೆ? ಹಾಲಿವುಡ್‌ನ ತಾರೆಗಳು ವಾಸ ಮಾಡುವುದು ಎಲ್ಲಿ ಗೊತ್ತಲ್ಲ! ಬೇವರ್ಲಿ ಹಿಲ್ಲ್ಸ್ ಮತ್ತು ಬೆಲ್ ಏರ್. ಓಹೊ! ಹಾಗಾದರೆ ಹಾಲಿವುಡ್ ಎನ್ನುವುದು ಬೇವ್ ಮತ್ತು ಬೆಲ್ ಮೇಳೈಸಿರುವ ಜಾಗ. ಇನ್ನು ಈ ಸಿಲಿಕಾನ್ ಕಣಿವೆಯಲ್ಲಿ ಯಾರನ್ನು ಕೇಳಿದರೂ ಎಲ್ಲರದೂ ಒಂದೇ ಗೋಳು. ಯಾವಾಗ ನೋಡಿದರೂ ಆಫೀಸ್ ಕೆಲಸ. ಹಗಲು, ರಾತ್ರಿ ಹಾಗು ವಾರಾಂತ್ಯದಲ್ಲಿ - ಗಂಟೆ ಗಟ್ಟಳೆ ಕೆಲಸ. ಗಂಟೆಗೆ ಇಂಗ್ಲೀಶ್ ಪದ ಗೊತ್ತಲ್ಲ - ಬೆಲ್. ಗಂಟೆಗಟ್ಟಳೆ ಕೆಲಸದಿಂದ ಮತ್ತೆ stressಉ. ಅದೆ ಬೆಲ್, ಅದೇ ಬೇವು. ಈ ರೀತಿ ಹೊರಳಿ ಹೊರಳಿ ಬೇವ್ ಮತ್ತು ಬೆಲ್ ಒಂದಕ್ಕೊಂದು ಹೊಂದಿಕೊಂಡಿರುವುದು ಕಾಣಲು ಸಿಗುವುದು - only in america -the land of bev and bel.
(This article was first printed in Swarnasetu 2005)
No comments:
Post a Comment