ಪುಟ್ಟಿ ಮನೆಗೆ ಬಂದಾಗ
ಇದೇ ತಾನೆ ಊರಿಗೆ ಕಾಲಿಟ್ಟ ಖಾಲಿ ಹೊಟ್ಟೆಯ ಪುಟ್ಟಿಯು
ತಟ್ಟೆಯನು ತಾ ಮುಂದಿಟ್ಟಾಗ, ದೋಸೆ ಹಿಟ್ಟಿನ ಕ್ವಾಲಿಟಿ ತಾ ಮುಖ್ಯವೆ ?
ಸೊಂಯ್ಯೆಂದು ಬಿಟ್ಟ ದೋಸೆಯನು ಕಾಯ್ ಚಟ್ನಿಯಲಿ ಅದ್ದಿ
ಅಮ್ಮನು ಪುಟ್ಟಿಯ ಬಾಯ್ಲಿಡಲು,
ಐಸೊ ನೈನ್ ತೌಸೆಂಡಿಗೆ ಕಿಚ್ಚು ಹಚ್ಚೆಂದ, ತಂತ್ರಜ್ಞ !
ಮೇ ಐದು ೨೦೧೦
ಐದು
ಐದು
ಹತ್ತು
ಈವತ್ತು
ಯಾವತ್ತೂ
ಬೇಗಲ್‍ಏ ತಿನ್‍ಈ ದೋಸೆ
ಕೆಂಪಗೆ ಕಾಯಿಸಿ, ಬೆಣ್ಣೆಯ ಲೇಪಿಸಿ
ಮಸಾಲೆ ದೋಸೆ ಎಂದೇ ಭ್ರಮಿಸಿ
ಟೋಸ್ಟರ್ ಎಂಬ ಕಾವಲಿಯಿಂದ
ಬೇಗಲ್ ಎಂಬ ಒಣಕಲು ಬನ್ನನು
ಬೇಗನೆ ತೆಗೆದು ಮರೆಯಲಿ ಕುಳಿತು
ಬಾಯ ಚಪ್ಪರಿಸಿರೊ ಮಂಕುದಿಣ್ಣೆಗಳ
ಎಂದನಾ ತಂತ್ರಜ್ಞ
ಟಿಪ್ಪಣಿ: ಬೇಗಲ್ ಎನ್ನುವುದು ಅಮೇರಿಕದಲ್ಲಿ ಭಯಂಕರ ಪ್ರಸಿದ್ಧಿ ಹೊಂದಿರುವ ಒಣಗಿದ ಖಡಕ್ ಬನ್ನು
2 comments:
ದೋಸೆ ಚಟಾಕಿ ಚೆನ್ನಾಗಿದೆ!
nanu e blog annu egaste nodide thumba chennagide nimma begal kavan
by- basaveshg
Post a Comment