ನಿನ್ನೆ ಸಂಜೆ ನನ್ನ ಮಗಳ ಬ್ಯಾಸ್ಕೆಟ್ ಬಾಲ್ ಪಂದ್ಯ ಒಂದು ಸ್ಕೂಲ್ ಮೈದಾನದಲ್ಲಿತ್ತು. ಆಫೀಸಿನಿಂದ ಆ ಸ್ಕೂಲಿಗೆ ನೇರವಾಗಿ ಹೇಗೆ ಹೋಗುವುದು ಅಂತ ತಿಳಿದುಕೊಳ್ಳಲು ಮೊಬೈಲ್ ಫೋನಿನ ಗೂಗಲ್ ನಕ್ಷೆಯನ್ನು ವಿಚಾರಿಸಿದೆ. ಆ ಅಧಿಕ ಪ್ರಸಂಗಿ ಫೋನು ಸುಮ್ಮನೆ ನನಗೆ ಬೇಕಾದ ಮಾರ್ಗದರ್ಶನ ನೀಡೋದು ಬಿಟ್ಟು "The school will be closed by the time you reach there" ಅನ್ನುವುದೆ? "ಎಲೆ ಎತ್ತೊ ಗುಂಡ ಅಂದ್ರೆ ಉಂಡೋರ್ ಎಷ್ಟ್ ಜನ?" ಅಂದ ಹಾಗಾಯ್ತು ಇದು. ಸ್ವಲ್ಪ ಕಿರಿಕಿರಿ ಉಂಟಾದದರೂ ನಮ್ಮ ಕನ್ನಡದ ಗಾದೆ ಹೇಗೆ ಕಾಲ ದೇಶಗಳನ್ನಷ್ಟೇ ಅಲ್ಲದೆ ತಂತ್ರಜ್ಞಾನಗಳನ್ನು ದಾಟಿ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ ಅಂತ ಹೆಮ್ಮೆಯಾಯಿತು.
No comments:
Post a Comment