ವರ್ಕ್ ಫ಼್ರಂ ಹೋಮ್
"ಬೆಣ್ಣೆ ದೋಸೆ ಬರ್ತಾ ಇದೆ"
ಅಂತ ಒಳಗಿನಿಂದ ಅಮ್ಮ ಹೇಳಿದಾಗ
ಬೆಳಗಿನಿಂದ ಹೊರ ಕೊಠಡಿಯಲ್ಲಿ
ಮನೆಯಿಂದಾನೆ ಕೆಲಸ ಮಾಡುತ್ತಿದ್ದ ನಾನು
ಪೂರಿಯಂತೆ ಉಬ್ಬಿ
ಆಡುಗೆ ಮನೆಗೆ ಹಾರಿಹೋದೆ.
"ಒಗ್ಗರಣೆ ಡಬ್ಬೀಲಿ"
ಅಂತ ಅಮ್ಮ ಮುಂದುವರಿಸಿದಾಗ
ಉಸಿರು ಹಿಡಿದು ಪೂರಿ ಪರಿಯಲ್ಲೆ ನಿಂತೆ.
"ಹನ್ನೊಂದು ಗಂಟೆಗೆ Zee ನಲ್ಲಿ"
ಅಂತ TV ಕಡೆ ಬೆಟ್ಟು ತೂರಿಸಿದಾಗ
ಪಂಕ್ಚರ್ ಆದ ಬೆಲೂನಿಂತೆ
ಸುರ್ರೆಂದು ತೇಲಿಕೊಂಡು
ಹೊರ ಕೊಠಡಿಗೆ ಬಂದು
ನಿಯಮಾನುಸಾರ ಕೌಚಿನ ಮೇಲೆ ಕುಸಿದು
ಕೆಲಸ ಮುಂದುವರಿಸಿದೆ.
ಅಂತ ಒಳಗಿನಿಂದ ಅಮ್ಮ ಹೇಳಿದಾಗ
ಬೆಳಗಿನಿಂದ ಹೊರ ಕೊಠಡಿಯಲ್ಲಿ
ಮನೆಯಿಂದಾನೆ ಕೆಲಸ ಮಾಡುತ್ತಿದ್ದ ನಾನು
ಪೂರಿಯಂತೆ ಉಬ್ಬಿ
ಆಡುಗೆ ಮನೆಗೆ ಹಾರಿಹೋದೆ.
"ಒಗ್ಗರಣೆ ಡಬ್ಬೀಲಿ"
ಅಂತ ಅಮ್ಮ ಮುಂದುವರಿಸಿದಾಗ
ಉಸಿರು ಹಿಡಿದು ಪೂರಿ ಪರಿಯಲ್ಲೆ ನಿಂತೆ.
"ಹನ್ನೊಂದು ಗಂಟೆಗೆ Zee ನಲ್ಲಿ"
ಅಂತ TV ಕಡೆ ಬೆಟ್ಟು ತೂರಿಸಿದಾಗ
ಪಂಕ್ಚರ್ ಆದ ಬೆಲೂನಿಂತೆ
ಸುರ್ರೆಂದು ತೇಲಿಕೊಂಡು
ಹೊರ ಕೊಠಡಿಗೆ ಬಂದು
ನಿಯಮಾನುಸಾರ ಕೌಚಿನ ಮೇಲೆ ಕುಸಿದು
ಕೆಲಸ ಮುಂದುವರಿಸಿದೆ.
No comments:
Post a Comment