My other links

Archives of Kannada Radio Program
http://www.itsdiff.com/Kannada.html

(Kannada Songs, interviews with C Ashwath, PB Srinivas and more)


ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya

My first acting performance in a short movie (15 min): Please click here -> Kelade Nimageega - Short Movie

Sunday, February 10, 2019

ಪಾತ್ರೆ ಸಾರಥಿ

ಪಾತ್ರೆಸಾರಥಿ ವಾರ್ತೆ.


ಪಾತ್ರೆಸಾರಧಿ ಅನ್ನೋದು ಪಾತ್ರೆ ತೊಳೆಯುವ ಜವಾಬ್ದಾರಿ ಹೊತ್ತವನು ಅನ್ನೊ ಅರ್ಥವೂ ಇದೆ. ಸ್ವತಹ ಕೈಯಲ್ಲಿ ತೊಳೆಯುವುದೊ ಅಥವ ಅದಕ್ಕೆ ತೊಳೆಯುವ ಯಂತ್ರವನ್ನು ಬಳಸೋದೋ ಅನ್ನೋದು ಅವನ ಕಾರ್ಯವೈಕರಿಯನ್ನು ಆಧರಿಸಿದ್ದು. ಈ ಎರಡು ವಿಧಾನಗಳಲ್ಲಿ ಯಾಂತ್ರಿಕ ವಿಧಾನಕ್ಕಿಂತಲೂ ಕೈ ಕೆಲಸವೇ ಸಾಧು ಎಂದು ಅನುಭವಸ್ತರು ಹೇಳುತ್ತಾರೆ. ನೀವು ಯಂತ್ರವನ್ನು ಬಳಸುವಿರಾದರೆ ಪಾತ್ರೆಗಳನ್ನು ನೂರಕ್ಕೆ ತೊಂಬತ್ತು ಭಾಗ ಕೈಯಲ್ಲಿ ತೊಳೆದೇ ಯಂತ್ರದೊಳಗೆ ಇರಿಸಬೇಕೆಂಬುದು ಯಂತ್ರದ ಅಲಿಖಿತ ಕರಾರು. ಹಾಗೆ ಮಾಡದಿದ್ದಲ್ಲಿ ಪಾತ್ರೆಗಳನ್ನು ಸರಿಯಾಗಿ ತೊಳೆಯದೆ, ಆಹಾರದ ತುಣುಕುಗಳನ್ನು ಸಾಕಷ್ಟು ಕಡೆ ಉಳಿಸಿ, ಅಷ್ಟಕ್ಕೇ ಸುಮ್ಮನಾಗದೆ ಅದನ್ನು ಕೈಯಲ್ಲಿ ಕೀಳುವುದಿರಲಿ ಮೊಗುಚೋ ಕೈಯಲ್ಲಿ ಎಬ್ಬಿದರೂ  ಬರದ ರೀತಿ ಪಾತ್ರೆಗಳಿಗೆ ಆಂಟಿಕೊಳ್ಳುವಂತೆ ಒಣಗಿಸಿ, ಯಂತ್ರವು ಪಾತ್ರೆಸಾರಥಿಯ ಬದುಕನ್ನು ಸಂಕಟಮಯವಾಗಿಸುತ್ತದೆ. ನೂರಕ್ಕೆ ತೊಂಬತ್ತು ಭಾಗ ತೊಳೆಯುವುದೇ ಆದರೆ ಸಂಪೂರ್ಣವಾಗಿ ಕೈಯಲ್ಲೇ ತೊಳೆದು ಬಿಡುವುದೇ ಸರಿಯಾದ ಕ್ರಮ ಎಂದು ತನ್ನ ಸದಸ್ಯರಿಗೆ ಸ್ಥಳಿಯ ಪಾತ್ರೆಸಾರಥಿ ಸಂಘದವರು ಆದೇಶ ನೀಡಿದ್ದಾರೆ.  ಕೈಯಲ್ಲಿ ತೊಳೆದ ಪಾತ್ರೆಗಳನ್ನು  ಪಾತ್ರೆತೊಳೆಯುವ ಯಂತ್ರದಲ್ಲಿ ಇರಿಸಿ ನೀರಿಳಿಸುವ ಮೂಲಕ ಯಂತ್ರದ ನಿರುಪಯುಕ್ತತೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಸಲಹೆಯನ್ನೂ ಸಂಘವು ನೀಡಿದೆ

No comments: