My other links

Archives of Kannada Radio Program
http://www.itsdiff.com/Kannada.html

(Kannada Songs, interviews with C Ashwath, PB Srinivas and more)


ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya

My first acting performance in a short movie (15 min): Please click here -> Kelade Nimageega - Short Movie

Tuesday, April 18, 2017

ದಯವಿಟ್ಟು ಕವಿತೆ ಬರೆಯುವ ಈ ಪ್ರಯೋಗದಲ್ಲಿ ಭಾಗವಹಿಸಿ - ಏಕ್ ಅಕೇಲ

ದಯವಿಟ್ಟು ಕವಿತೆ ಬರೆಯುವ ಈ ಪ್ರಯೋಗದಲ್ಲಿ ಭಾಗವಹಿಸಿ :-)
ನೀವು ಮಾಡಬೇಕಾದ್ದು: ಕೆಳಗೆ ನೀಡಿರುವ ಹಿಂದಿ ಹಾಡಿನ 7 ಸಾಲುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಕವಿತೆ ಬರೆಯಬೇಕು.
ವಿವರಗಳು:
ಇದು ಒಂದು ಪ್ರಯೋಗ. ಒಂದೆ ಅರ್ಥಬರುವಂತ ಕವಿತೆಯನ್ನು ವಿವಿಧ ಬರಹಗಾರರು, ವಿವಿಧ ರೀತಿಯಲ್ಲಿ ಬರೆದರೆ ಹೇಗಿರುತ್ತದೆ ಎನ್ನುವುದನ್ನು ತಿಳಿಯುವುದೇ ಈ ಪ್ರಯೋಗದ ಉದ್ದೇಶ. ಹೆಚ್ಚಿನ ಬರಹಗಾರರು ಬರೆಯಲು ಅನುಕೂಲಕರವಾಗಿರಬೇಕು. ಸ್ವಂತ ಕವಿತೆ ಬರೆಯುವ ಬದಲು ಭಾಷಾಂತರ ಮಾಡುವುದು ಸುಲಭವೆನಿಸಿ ಈ ಪ್ರಯೋಗವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಹಾಗಾಗಿ ಹಿಂದಿಯ ಒಂದು ಚಿತ್ರಗೀತೆಯ ಕೆಲ ಸಾಲುಗಳನ್ನು ಆಯ್ದುಕೊಂಡಿದ್ದೇನೆ. ಈ ಸಾಲುಗಳನ್ನು ಕನ್ನಡಕ್ಕೆ ಸೃಜನಾತ್ಮಕವಾಗಿ ಭಾಷಾಂತರಿಸುವುದೇ ಈಗಿರುವ ಕೆಲಸ.
ಘರೋಂಡ ಚಿತ್ರಕ್ಕೆಂದು ಗುಲ್ಜಾರ್ ಅವರು ರಚಿಸಿರುವ "ಏಕ್ ಅಕೇಲ ಇಸ್ ಶಹರ್ ಮೆ" ನನಗೆ ಅತೀ ಇಷ್ಟವಾಗುವ ಹಾಡುಗಳಲ್ಲಿ ಒಂದು. ಭೂಪಿಂದರ್ ಅವರ ಸಾಂತ್ವಾನ ನೀಡುವಂತಹ ಧ್ವನಿಯಲ್ಲಿ, ಮಂದ ಗತಿಯಲ್ಲಿ ಸಾಗುವ ಈ ಹಾಡಿನ ಅರ್ಥಗರ್ಭಿತ ಪ್ರತಿಮೆಗಳುಳ್ಳ ಸಾಲುಗಳು ಮುಂಬೈನಂತ ಬೃಹತ್ ನಗರದ ನಿವಾಸಿಗಳ ಯಾಂತ್ರಿಕತೆ ಹಾಗು ಅನಾಥ ಪ್ರಜ್ಞೆಗಳನ್ನು ಸಮರ್ಪಕವಾಗಿ ಹೊರಗೆಡುಹುತ್ತದೆ. ಈ ಹಾಡಿನ ಎರಡನೆ ನುಡಿಯಲ್ಲಿರುವ ಈ ಸಾಲುಗಳು ಕೇಳುಗರ ಅಂತರಂಗವನ್ನು ಮುಟ್ಟುವಲ್ಲಿ ಬಹಳ ಸಫಲವಾಗಿವೆ ಅನಿಸುತ್ತದೆ.
"ಇನ್ ಉಮ್ರ್ ಸೆ ಲಂಬಿ ಸಡಕೋಂಕೊ,
ಮಂಜಿಲ್ ಪೆ ಪಹುಂಚ್ತೆ ದೇಖಾ ನಹಿ
ಬಸ್ ದೌಡತಿ ಫಿರತೀ ರೆಹತಿ ಹೈ
ಹಮ್ನೆ ತೊ ಟೆಹರತೆ ದೇಖಾ ನಹಿ
ಇಸ್ ಅಜನಬೀ ಸೆ ಶೆಹರ್ ಮೇ
ಜಾನಾ ಪೆಹಚಾನ ಢೂಂಡ್ತಾ ಹೈ,
ಢೂಂಡ್ತಾ ಹೈ, ಢೂಂಡ್ತಾ ಹೈ"
ಈ ಸಾಲುಗಳ ತಾತ್ಪರ್ಯವನ್ನು ಇಂಗ್ಲೀಶ್ನಲ್ಲಿ ಇಲ್ಲಿ ಕೊಡುತ್ತೇನೆ.
I have tried to give a simple translation of the above lines here. If there is anything wrong please correct me.
"These streets which seem longer than one's life span,
never seem to reach a destination.
It seems they just run and move around.
They never seen to stop for a while.
In this unfamiliar city, all it does is to constantly search
for known and familiar faces"
ಈಗ ಇಲ್ಲಿರುವ ಜಾಣ ಜಾಣೆಯರಿಗೆ ಒಂದು ಸವಾಲು.
ಈ ಮೇಲಿನ ಸಾಲುಗಳನ್ನು ಕನ್ನಡದಲ್ಲಿ, ಮೂಲದಲ್ಲಿರುವಷ್ಟೇ ಅಥವ ಮತ್ತಷ್ಟು ಪರಿಣಾಮಕಾರಿಯಾಗಿ ಬರೆಯಲು ನಿಮಗೆ ಸಾಧ್ಯವೆ? ಯಾವುದೇ ನಿರ್ಬಂಧವಿಲ್ಲ ! ನೀವು ಯಾವುದೇ ರೀತಿಯ ಕಾವ್ಯಾಲಂಕಾರಗಳನ್ನು ಬಳಸಬಹುದು, ಬಳಸದಿರಲೂಬಹುದು. ಈ ಮೇಲಿನ ಅರ್ಥ ಬರಬೇಕು ಮತ್ತು ಹಾಡಿನ ಲಯಕ್ಕೆ ಬದ್ಧವಾಗಿರಬೇಕು ಅಷ್ಟೆ! ನೀವು ಪ್ರಯತ್ನ ಪಡುವ ಮುನ್ನ ಬೇರೆಯವರು ಬರೆದಿದ್ದರೆ, ಅದರಿಂದ ಪ್ರಭಾವಿತರಾಗಬೇಡಿ. ನಿಮ್ಮ ಕಲ್ಪನೆಗೆ ಬಂದದ್ದನ್ನು ಖಂಡಿತ ಬರೆಯಿರಿ. ಆಯ್ಯೊ ಅವರಿನ್ಯಾರೋ ಈಗಾಗಲೆ ಬರೆದು ಬಿಟ್ಟಿದಾರೆ ಅಂತ ನೀವು ಸುಮ್ಮನಾಗಬಾರದು ಅಂತ ನನ್ನ ಕೋರಿಕೆ.
ಆಲ್ ದಿ ಬೆಸ್ಟ್!

https://www.youtube.com/watch?v=Pax5xLX6aNU

No comments: