My other links

Archives of Kannada Radio Program
http://www.itsdiff.com/Kannada.html

(Kannada Songs, interviews with C Ashwath, PB Srinivas and more)


ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya

My first acting performance in a short movie (15 min): Please click here -> Kelade Nimageega - Short Movie

Sunday, March 3, 2019

ವರ್ಕ್ ಫ಼್ರಂ ಹೋಮ್

ವರ್ಕ್ ಫ಼್ರಂ ಹೋಮ್
"ಬೆಣ್ಣೆ ದೋಸೆ ಬರ್ತಾ ಇದೆ"
ಅಂತ ಒಳಗಿನಿಂದ ಅಮ್ಮ ಹೇಳಿದಾಗ
ಬೆಳಗಿನಿಂದ ಹೊರ ಕೊಠಡಿಯಲ್ಲಿ
ಮನೆಯಿಂದಾನೆ ಕೆಲಸ ಮಾಡುತ್ತಿದ್ದ ನಾನು
ಪೂರಿಯಂತೆ ಉಬ್ಬಿ
ಆಡುಗೆ ಮನೆಗೆ ಹಾರಿಹೋದೆ.
"ಒಗ್ಗರಣೆ ಡಬ್ಬೀಲಿ"
ಅಂತ ಅಮ್ಮ ಮುಂದುವರಿಸಿದಾಗ
ಉಸಿರು ಹಿಡಿದು ಪೂರಿ ಪರಿಯಲ್ಲೆ ನಿಂತೆ.
"ಹನ್ನೊಂದು ಗಂಟೆಗೆ Zee ನಲ್ಲಿ"
ಅಂತ TV ಕಡೆ ಬೆಟ್ಟು ತೂರಿಸಿದಾಗ
ಪಂಕ್ಚರ್ ಆದ ಬೆಲೂನಿಂತೆ
ಸುರ್ರೆಂದು ತೇಲಿಕೊಂಡು
ಹೊರ ಕೊಠಡಿಗೆ ಬಂದು
ನಿಯಮಾನುಸಾರ ಕೌಚಿನ ಮೇಲೆ ಕುಸಿದು
ಕೆಲಸ ಮುಂದುವರಿಸಿದೆ.

Wednesday, February 13, 2019

ವ್ಯಾಲೆಂಟೈನ್ ಗುಲಾಬಿ



ವ್ಯಾಲೆಂಟೈನ್ ಗುಲಾಬಿ
ಇಂದು ಪ್ರೇಮದ ಸಂಕೇತವಾಗಿ,
ನಾಳೆ ಗುಲ್ಕಂದ್ ಆಗಿ,
ಎಲೆಯೊಳಗೊಂದಾಗಿ,
ಬೀಡಾ ಎಂದಾಗಿ,
ತುಟಿ ಬಾಯಿ ಕೆಂಪಾಗಿ,
ಕೈಯಿಂದ ಮುಡಿಗೆ,
ಮುಡಿಯಿಂದ ಅಡಿಗೆ,
ಬಿದ್ದರೂ,
ಬಾಯ್ ಸೇರಿ ಮೆರೆವೆ,
ಓ ಕೆಂಗುಲಾಬಿಯೆ!

ಶುಭ ಶುಕ್ರವಾರ

Photo Credit: Internet

ಶುಭ ಶುಕ್ರವಾರ
ಕಂಪನಿ ಕೃಪಾಪೋಷಿತ
ನಾಟಕ ಮಂಡಳಿಯ
ಗೋಳು ನಾಟಕದ
ಈ ವಾರದ ಕಡೇಯ
ಆಟಕ್ಕೆ
ಬೇಗಲೇ ಬಂದು
ಬೇಗಲೇ ತಿಂದು
ಕಾಫಿ ಕುಡಿದು
ಮಧ್ಯೆ ಮಧ್ಯೆ
ಒಂದೆರಡು ಬಾರಿ
ಒಂದೆರಡ ಮುಗಿಸಿ
ಮದ್ಯಾಹ್ನದ ಮೀಟಿಂಗಿನಲ್ಲಿ
ಮಧ್ಯೆ ಮಧ್ಯೆ ಎಚ್ಚೆತ್ತು
ನಾನೂ ಇದೀನಿ ಅಂತ
ಕನವರಿಸಿ
ಇಂದಿನ ಆಟಕ್ಕೆ
ಪರದೆ ಎಂದು ಬೀಳುವುದೋ
ಎಂದು ಕಾಯುವಾಗ
ವಾರಾಂತ್ಯದಲ್ಲಿ ಬಿಡುಗಡೆ ಆಗಲಿರುವ
ಈಗಾಗಲೆ ಸಾವಿರಾರು ಸಲ ನೋಡಿ
ನಿರಾಸೆಗೊಂಡಿರುವ
ಹರ್ಷಮಯ ನಾಟಕದ ಬಗ್ಗೆ
ಸಂಭ್ರಮ.
ಸಡಗರ.

Sunday, February 10, 2019

ಪಾತ್ರೆ ಸಾರಥಿ

ಪಾತ್ರೆಸಾರಥಿ ವಾರ್ತೆ.


ಪಾತ್ರೆಸಾರಧಿ ಅನ್ನೋದು ಪಾತ್ರೆ ತೊಳೆಯುವ ಜವಾಬ್ದಾರಿ ಹೊತ್ತವನು ಅನ್ನೊ ಅರ್ಥವೂ ಇದೆ. ಸ್ವತಹ ಕೈಯಲ್ಲಿ ತೊಳೆಯುವುದೊ ಅಥವ ಅದಕ್ಕೆ ತೊಳೆಯುವ ಯಂತ್ರವನ್ನು ಬಳಸೋದೋ ಅನ್ನೋದು ಅವನ ಕಾರ್ಯವೈಕರಿಯನ್ನು ಆಧರಿಸಿದ್ದು. ಈ ಎರಡು ವಿಧಾನಗಳಲ್ಲಿ ಯಾಂತ್ರಿಕ ವಿಧಾನಕ್ಕಿಂತಲೂ ಕೈ ಕೆಲಸವೇ ಸಾಧು ಎಂದು ಅನುಭವಸ್ತರು ಹೇಳುತ್ತಾರೆ. ನೀವು ಯಂತ್ರವನ್ನು ಬಳಸುವಿರಾದರೆ ಪಾತ್ರೆಗಳನ್ನು ನೂರಕ್ಕೆ ತೊಂಬತ್ತು ಭಾಗ ಕೈಯಲ್ಲಿ ತೊಳೆದೇ ಯಂತ್ರದೊಳಗೆ ಇರಿಸಬೇಕೆಂಬುದು ಯಂತ್ರದ ಅಲಿಖಿತ ಕರಾರು. ಹಾಗೆ ಮಾಡದಿದ್ದಲ್ಲಿ ಪಾತ್ರೆಗಳನ್ನು ಸರಿಯಾಗಿ ತೊಳೆಯದೆ, ಆಹಾರದ ತುಣುಕುಗಳನ್ನು ಸಾಕಷ್ಟು ಕಡೆ ಉಳಿಸಿ, ಅಷ್ಟಕ್ಕೇ ಸುಮ್ಮನಾಗದೆ ಅದನ್ನು ಕೈಯಲ್ಲಿ ಕೀಳುವುದಿರಲಿ ಮೊಗುಚೋ ಕೈಯಲ್ಲಿ ಎಬ್ಬಿದರೂ  ಬರದ ರೀತಿ ಪಾತ್ರೆಗಳಿಗೆ ಆಂಟಿಕೊಳ್ಳುವಂತೆ ಒಣಗಿಸಿ, ಯಂತ್ರವು ಪಾತ್ರೆಸಾರಥಿಯ ಬದುಕನ್ನು ಸಂಕಟಮಯವಾಗಿಸುತ್ತದೆ. ನೂರಕ್ಕೆ ತೊಂಬತ್ತು ಭಾಗ ತೊಳೆಯುವುದೇ ಆದರೆ ಸಂಪೂರ್ಣವಾಗಿ ಕೈಯಲ್ಲೇ ತೊಳೆದು ಬಿಡುವುದೇ ಸರಿಯಾದ ಕ್ರಮ ಎಂದು ತನ್ನ ಸದಸ್ಯರಿಗೆ ಸ್ಥಳಿಯ ಪಾತ್ರೆಸಾರಥಿ ಸಂಘದವರು ಆದೇಶ ನೀಡಿದ್ದಾರೆ.  ಕೈಯಲ್ಲಿ ತೊಳೆದ ಪಾತ್ರೆಗಳನ್ನು  ಪಾತ್ರೆತೊಳೆಯುವ ಯಂತ್ರದಲ್ಲಿ ಇರಿಸಿ ನೀರಿಳಿಸುವ ಮೂಲಕ ಯಂತ್ರದ ನಿರುಪಯುಕ್ತತೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಸಲಹೆಯನ್ನೂ ಸಂಘವು ನೀಡಿದೆ

Tuesday, May 29, 2018

Facebook Mantra

ಅಣ್ಣಾವ್ರು ಇದ್ದಿದ್ರೆ ಹೀಗಂದಿರೌರು.
ಮುತ್ತಿನಂಥ ಮಾತೊಂದು ಗೊತ್ತೇನಮ್ಮ
ನಿನಗೆ ಗೊತ್ತೇನಮ್ಮ
ನಾವು ಒಂದು ದಿನಕೆ
ಒಂದೇ ಪೋಸ್ಟು ಮಾಡಬೇಕು
ಲೈಕು ನೂರು ಇದ್ದರೂ
ಕಾಮೆಂಟ್ ಮಾತ್ರ
ಮೂರು ಸಾಕು.

Saturday, May 5, 2018

Ancient Theater in Greece.

I had read that theater originated in Greece as early as in the 5th century BC. Thespis was the first person ever to appear on stage as an actor playing a character in a play (leading to actors being called Thespians). Euripides, Aeschylus and Sophocles are three ancient Greek tragedians from that period whose plays have survived. Antigone, Oedipus Rex and Medea are some of their pioneering works. They would play these 'Greek Tragedies' on the slopes of hills watched by thousands of viewers. It was nice to imagine being there when they performed these plays.
Last summer I got the opportunity to visit one such place. This is the picture of the ancient theater located on the slopes of the mountains in Delphi, Greece, It was originally built in the 4th century BC.
It is a mesmerizing experience to stand and walk in the place where theater originated more than 2000 years ago. The occasion of 'World Theater Day' brought back this memory.


Dostalgia

Yesterday my friend Vinay posted on FB asking where in the Bay area he can find set dosey similar to what we get in Bengaluru. That reminded me of my NCC parades on Saturday and Sunday mornings during my Pre University College days back in Bengaluru. In my College days I was a cadet in Armored Corps. I would go off to Malleswaram 18th Cross grounds early in the morning to take part in a 4 hour tiring NCC parade which involved march-pasts, standing in ATTENTION and once in a while the drill sergeant would order 'Stand at ease'.
After all the grilling NCC drill, they would give us a coupon for Rs 1.80 for 'New Krishna Cafe' at the intersection of 17th cross and 8th Main in Malleswaram - very close to MES college.
So walking back home from the parade ground I would stop at Sri Krishna Cafe. What could I get for Rs 1.80? As it turns out we could order a 'set dosey' with three thick porous Doseys for Rs 1.80. I would tell the 'hotel' clerk "set dosey. Parcel !! " .
The high light was that they would wrap the 3 Doseys in two layers of banana leaves with - get this - a generous serving of the most delicious gaTTi chutney (Thick Chutney) between the 2 banana leaves. Those banana leaves enhanced the taste of the Dosey and the Chutney by 200%.
I could not wait to go home and unwrap this dosey packet. The bliss of eating it made the 4 hour drill in the morning on an empty stomach and the 30 minute walk back home well worth the effort.